   ಮೂಲದೊಡನೆ ಪರಿಶೀಲಿಸಿ

ಕೆಲ್ವಿನ್ ಬ್ರಿಜ್

ವಿದ್ಯುದ್ರೋಧವನ್ನು ಅಳೆಯಲು ಉಪಯೋಗಿಸುವ ಒಂದು ವಿದ್ಯುತ್ ಸಲಕರಣೆ.  ವ್ಹೀಟ್‍ಸ್ಟೋನ್ ಬ್ರಿಜ್‍ನ (ನೋಡಿ) ಸುಧಾರಿತ ವಿದ್ಯುತ್ ಸಲಕರಣೆಯಿದು.  ವಿದ್ಯುದ್ರೋಧಗಳ ಹೋಲಿಕೆಯ ವಿಧಾನದ ಮೇಲೆ ಆಧಾರಿತವಾಗಿರುವ ವ್ಹೀಟ್‍ಸ್ಟೋನ್ ಬ್ರಿಜ್‍ನಂತೆಯೇ ಕೆಲ್ವಿನ್ ಬ್ರಿಜ್‍ನಲ್ಲೂ ಹೋಲಿಕೆಯ ವಿಧಾನವನ್ನು ಅನುಸರಿಸಲಾಗುತ್ತದೆ.  ಇಲ್ಲಿ ಸಂಪರ್ಕರೋಧವನ್ನು (ಕಾಂಟ್ಯಾಕ್ಟ್ ರೆಸಿಸ್ಟೆನ್ಸ್) ಮತ್ತು ಲೀಡ್ ಪರಿಣಾಮವನ್ನು ತೆಗೆದುಹಾಕಿಯೋ ಇಲ್ಲವೇ ಬಹುಪಾಲು ಕಡಿಮೆ ಮಾಡಿಯೋ ಕಡಿಮೆ ಪರಿಮಾಣದ ವಿದ್ಯದ್ರೋಧವನ್ನು ನಿಖರವಾಗಿ ಅಳೆಯಬಹುದಾಗಿದೆ.  ಕೆಲ್ವಿನ್ ಬ್ರಿಜ್‍ನ ವಿದ್ಯುನ್ಮಂಡಲದ ವಿವರ ಹೀಗಿದೆ.

ಚಿತ್ರ-1

ಖಂ ಮತ್ತು ಖಃ-ಪ್ರಧಾನ ಅನುಪಾತ ರೋಧಕಗಳು.  ಖಚಿ ಮತ್ತು ಖb ಸಹಾಯಕ ಅನುರೋಧಕಗಳು.  ಖಘಿ ಎಂಬುದು ಒಂದು ಅಜ್ಞಾತ ಪರಿಮಾಣದ ರೋಧಕ.  ಖS ಒಂದು ಶಿಷ್ಟ ರೋಧಕ.  ಅಜ್ಞಾತ ರೋಧಕ ಮತ್ತು ಖಚಿ, ಖb ಗಳ ನಡುವೆ ಕಡಿಮೆ ಪರಿಮಾಣದ ರೋಧವುಳ್ಳ (ಖಥಿ) ಭಾರವಾದ ಒಂದು ತಾಮ್ರದ ಪಟ್ಟಿ ಇದೆ.  ಖಚಿ,ಖಥಿ ಮತ್ತು ಖb ವ್ಯೂಹಕ್ಕೆ ಡೆಲ್ಟ-ವೈ ಪರಿವರ್ತನೆಯನ್ನು ಅನ್ವಯಿಸಿದರೆ ವ್ಹೀಟ್‍ಸ್ಟೋನ್ ಬ್ರಿಜ್‍ನ ವಿದ್ಯುನ್ಮಂಡದ ಪರಿಕಲ್ಪನೆ ಮೂಡುತ್ತದೆ.  ಇದರ ಚಿತ್ರಣವನ್ನು ಮುಂದೆ ತೋರಿಸಿದೆ.  

ಚಿತ್ರ-2

ಈ ವಿದ್ಯುನ್ಮಂಡಲಕ್ಕೆ 
         RS' =   Ry  Ra      
			  Ry+Ra+Rb
  	    RX' =    Ry Rb          ......(1) 
		      Ry+Ra+Rb
 	    RG' =    RaRb
  			 Ry+Ra+Rb
ಎಂಬ ಮೂರು ಸಮೀಕರಣಗಳು ಅನ್ವಯಿಸುತ್ತದೆ.

ಸಲಕರಣೆಯಲ್ಲಿ ಅಳವಡಿಸಿರುವ ಗ್ಯಾಲ್ವನೋಮೀಟರಿನಲ್ಲಿ ಯಾವ ಬದಲಾವಣೆಯೂ ತೋರಿಬರದಿದ್ದಾಗ ಅಂದರೆ, ವ್ಹೀಟ್‍ಸ್ಟೋನ್ ಬ್ರಿಜ್‍ನಂತೆ ಇಲ್ಲೂ ಸ್ಥಗಿತ ಸ್ಥಿತಿ ಏರ್ಪಟ್ಟಾಗ

RX= RBRS +RY     Rb       RB — Rb  ------(2)
    RA         Ra+Rb+Ry   RA — Ra

ಎಂಬ ಸಮೀಕರಣ ಲಭಿಸುತ್ತದೆ.  ಹೋಲಿಕೆಯ ತತ್ತ್ವವನ್ನು ಅಂದರೆ,
RB = Rb               ....(3)
RA = Rb
ಅನ್ವಯಿಸಿದಾಗ ಸಮೀಕರಣ (1)ರ ಎರಡನೆಯ ಪದ ಶೂನ್ಯವಾಗುತ್ತದೆ.  ಆಗ ಅಜ್ಞಾತ ರೋಧದ ಬೆಲೆಯ ಖಙ ಯನ್ನು ಅವಲಂಬಿಸಿರುವುದಿಲ್ಲ.  ಅಂತಿಮವಾಗಿ
RX= RBRS +RY
    RA

ಎಂಬ ಸಮೀಕರಣ ಲಭಿಸಿ ಕಡಿಮೆ ಪರಿಮಾಣದ ರೋಧಕದ ಬೆಲೆಯನ್ನು ನಿರ್ಧರಿಸಲು ಅನುಕೂಲವಾಗುತ್ತದೆ.
ಬಲು ದಪ್ಪವಾದ ಟ್ರಾಲಿತಂತಿಗಳಂಥ ವಿದ್ಯುತ್ ತಂತಿಗಳ ರೋಧವನ್ನು ಅಳೆಯಲು ಕೆಲ್ವಿನ್ ಬ್ರಿಜ್ ಬಹಳ ಸಹಾಯಕಾರಿ.                                                                
(ಎಂ.ಡಿ.ಕೆ.)